Shree Brahmananda Saraswathi Swamiji was chosen as Utharadhikari (successor) for this Shree Rama Kshetra Guru Pita after Shree Athmananda Saraswathi Swamiji.
Earlier Life Personal Information of Shree Brahmananda Saraswathi Swamiji
Name : Kamalaksha
Education : M.A LLB
Birth place : Shamboor
Taluk : Bantwal
State : Karnataka
Work Experience
Served as State Agricultural Director at Bangalore for the period of 4 years. As a Community development officer at MRPL Mangalore. Served as law practitioner under the famous Lawyer Purushottama Poojary at mangalore, for the period of 10 years. Swamiji received spiritual guidance and Omkara Dikshe from his father at the age of 16. Adyathma Dikshe from Avadootha Govinda swamiji, one of the successor of Avadootha Nithyananda Swamiji. Adyathmanubava from ‘Sri Vijayananda swamiji belagavi’.
Swamiji traveled all over the north and south India and visited holy places like Vyasa Guha at Simla, Vaishno devi, Amarnath, Haridwar, Hrishikesh, Kedhar, Badari, Gangotri, Yamunotri, Kurukshetra and also visited Dwadasha Jyothir Lingam and blessed with holy saints. Also visited Manasa Sarovara, Kailash Parwath at china and Pashupathinaath Temple at Nepal.
ಶ್ರೀಗಳವರು ತಮ್ಮ 13ನೇಯ ವಯಸ್ಸಿನಲ್ಲಿ ತನ್ನ ತಂದೆಯವರಿಂದಲೇ ಓಂಕಾರ ದೀಕ್ಷೆ, ಯೋಗ ದೀಕ್ಷೆಯನ್ನು ಪಡೆದವರಾಗಿರುತ್ತಾರೆ. ಕಾಲಕ್ರಮೇಣ ಸುಮಾರು 25 ವರ್ಷಗಳಿಂದ ನಿರಂತರ ಹಿಮಾಲಯದ ಪವಿತ್ರ ತಪೋಭೂಮಿಗಳಾದ ಚೀನಾದ ಮಾನಸ ಸರೋವರ, ಕೈಲಾಸಯಾತ್ರೆ, ನೇಪಾಳದ ಪಶುಪತಿನಾಥ, ಚಾರ್‌ಧಾಮಗಳಾದ ಗಂಗೋತ್ರಿ, ಯಮುನೇತ್ರಿ, ಬದರಿ, ಕೇದಾರಗಳ ಪರ್ಯಟನ, ಅಮರನಾಥ, ವೈಷ್ಟೋದೇವಿ, ಕಾಶ್ಮೀರದ ಶಂಕರಾಚಾರ್ಯ ಜ್ಞಾನಪೀಠ, ಹಿಮಾಲಯದ ವ್ಯಾಸಗುಫಾ, ಶ್ರೀ ಕೃಷ್ಣನ ಪವಿತ್ರ ಧಾಮಗಳಾದ, ದ್ವಾರಕಾನಗರಿ, ಮಥುರಾ, ವೃಂದಾವನ, ಗೋವರ್ಧನ ಗಿರಿ, ದತ್ತಾತ್ರೇಯರ ತಪೋಭೂಮಿ, ಜುನಾಗಡ ಗಿರ್‌ನಾರ್ ಪರ್ವತ, ರಾಜಸ್ಥಾನದ ಪುಷ್ಕರತೀರ್ಥ, ಪಾಕಿಸ್ತಾನದ ಸರಹದ್ದಿನಲ್ಲಿರುವ ನಾರಾಯಣ ಸರೋವರ, ಬಿಂದು ಸರೋವರ, ಕಾಶಿ, ಅಯೋಧ್ಯೆ, ಪ್ರಯಾಗರಾಜ್, ನೈಮಿಷಾರಣ್ಯ, ಚಿತ್ರಕೂಟ, ಭಗವಾನ್ ಪರಮೇಶ್ವರನ ಪವಿತ್ರ ದ್ವಾದಶ ಜ್ಯೋತಿರ್ಲಿಂಗಗಳ ದರ್ಶನ ಹಾಗೇನೆ ಹರಿದ್ವಾರ, ಇಲಹಾಬಾದ್, ಉಜ್ಜಯಿನಿ, ನಾಸಿಕ್‌ನಲ್ಲಾಗುವ ಎಲ್ಲಾ ಕುಂಭ ಮೇಳಗಳಲ್ಲಿ ಭಾಗವಹಿಸಿ ಮಹಾನ್ ತಪಸ್ವಿ ಪುಣ್ಯ ಪುರುಷರ ಸಂಪರ್ಕದಲ್ಲಿರುವವರು ಶ್ರೀಗಳವರು. ಹಾಗೇನೆ ತಮ್ಮ ಅನುಷ್ಠಾನ ಸಾಧನೆಗಳಿಂದ ಇವತ್ತು ಇವರೊಬ್ಬ ಶ್ರೇಷ್ಠ ಜ್ಞಾನ ಯೋಗಿ ಮಹಾನ್ ತಪಸ್ವಿಗಳಾಗಿ ನಮ್ಮ ಜಗದ್ಗುರು ಪೀಠದಲ್ಲಿ ವಿರಾಜಮಾನರಾಗಿ ಲೋಕ ಕಲ್ಯಾಣಾರ್ಥವಾಗಿ ಕರ್ಮಯೋಗವನ್ನು ನಡೆಸಿಕೊಂಡು ಬರುತ್ತಿದ್ದಾರೆ. ಲೌಕಿಕ ವಿದ್ಯೆಗಳಾದ ಎಂ. ಎ., ಎಲ್. ಎಲ್. ಬಿ. ಪದವಿಯನ್ನು ಪಡೆದು ಇವತ್ತಿನ ಸಾಮಾಜಿಕ ಅಭ್ಯುದಯಕ್ಕೆ ಬೇಕಾದ ಶಿಕ್ಷಣ ತಜ್ಞರು ಕೂಡಾ ಇವರಾಗಿದ್ದಾರೆ.
ಪೂಜ್ಯ ಜಗದ್ಗುರು ಆತ್ಮಾನಂದ ಸರಸ್ವತಿ ಸ್ವಾಮೀಜಿಯವರ ಸಮಾಧಿಯ ನಂತರ ಈ ಪವಿತ್ರವಾದ ಶ್ರೀ ರಾಮಕ್ಷೇತ್ರದ ಗುರುಪೀಠದ ಉತ್ತರಾಧಿಕಾರಿಯಾಗಿ ಪೀಠಾರೋಹಣ ಮಾಡಿದವರು ಸದ್ಗುರು ಶ್ರೀ ಶ್ರೀ ಶ್ರೀ ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿಯವರು.
ದಕ್ಷಿಣದ ಅಯೋಧ್ಯೆ ಎಂಬ ಖ್ಯಾತಿಯನ್ನು ಹೊಂದಿದ ಶ್ರೀರಾಮ ಕ್ಷೇತ್ರ, ನಿತ್ಯಾನಂದನಗರ, ಧರ್ಮಸ್ಥಳ. ಶ್ರೀ ಕ್ಷೇತ್ರವು ಶ್ರೀರಾಮ ದೇವರ ಪಾದಸ್ಪರ್ಶದಿಂದ ವಿಶ್ವಮಾನ್ಯತೆಯನ್ನು ಹೊಂದಿದ ಕೋಟ್ಯಂತರ ಭಕ್ತರ ಶ್ರದ್ಧಾಕೇಂದ್ರವಾಗಿದೆ. 1927 ರಲ್ಲಿ ಮುಂಬೈಯ ವಜ್ರೇಶ್ವರಿಯ ಭಗವಾನ್ ನಿತ್ಯಾನಂದರು ಈ ಪ್ರದೇಶಕ್ಕೆ ಆಗಮಿಸಿ, ಇಲ್ಲಿ ಒಂದು ದಿವಸ ತಂಗಿದ್ದು, ಈ ಭೂಮಿಯನ್ನು ಪಾವನಗೊಳಿಸಿದರು. ಇಡೀ ದೇಶದಲ್ಲಿಯೇ ಕಣ್ಮನ ಸೆಳೆಯುವ ಅಪ್ರತಿಮ ಗಾಂಭೀರ್ಯದಿಂದ ಕೂಡಿದ ಶ್ರೀ ಕ್ಷೇತ್ರದ ಹಿಂದಿನ ನಿರ್ಮಾತೃ ಶಕ್ತಿ ಜಗದ್ಗುರು ಶ್ರೀ ಶ್ರೀ ಶ್ರೀ ಆತ್ಮಾನಂದ ಸರಸ್ವತಿ ಸ್ವಾಮೀಜಿಯವರು. ಇವರೊಬ್ಬ ಮಹಾನ್ ಕರ್ಮಯೋಗಿ ಹಾಗೂ ದಾರ್ಶನಿಕರಾಗಿರುತ್ತಾರೆ. ಗುರುಗಳ ಸಾಧನೆಯಿಂದ ಆಕರ್ಷಿತರಾದ ದಕ್ಷಿಣ ಕನ್ನಡ ಜಿಲ್ಲೆಯ ಬಿಲ್ಲವರು, ಬೆಂಗಳೂರು ಉತ್ತರಕನ್ನಡ ಭಾಗದ ಈಡಿಗರು,
ನಾಮಧಾರಿ ಜನಾಂಗದವರು ಇನ್ನಿತರ ಎಲ್ಲಾ ಜಾತಿ ಜನಾಂಗದ ನಾಯಕರು, ಬುದ್ಧಿಜೀವಿಗಳು, ಸಾಧು-ಸಂತರು ಒಟ್ಟು ಸೇರಿ ಗುರುಗಳನ್ನು ತಮ್ಮ ಕುಲಗುರುಗಳಾಗಿ ಸ್ವೀಕರಿಸಿದರು. ಕೇರಳದ ಶಿವಗಿರಿಯ ಶ್ರೀ ನಾರಾಯಣ ಗುರು ಮಹಾಪೀಠದ ಗುರುಗಳಾದ ಪ್ರಕಾಶಾನಂದ ಸ್ವಾಮೀಜಿಯವರ ನೇತೃತ್ವದಲ್ಲಿ ಸುಮಾರು 30 ಸಂತರು ಅವರೊಂದಿಗೆ ಶ್ರೀ ರಾಮ ಕ್ಷೇತ್ರಕ್ಕೆ ಆಗಮಿಸಿದ್ದರು. ಹಾಗೇನೆ ಉತ್ತರ ಭಾರತದಿಂದಲೂ ಅನೇಕ ಸಾಧು-ಸಂತರು ಆಗಮಿಸಿ, ಶ್ರೀ ರಾಮ ಕ್ಷೇತ್ರದಲ್ಲಿ ಶಾಸ್ತ್ರೋಕ್ತವಾಗಿ ಗುರುಪೀಠವನ್ನು ನಿರ್ಮಾಣ ಮಾಡಿ, ಜನವರಿ 22 ನೇ ತಾರೀಕು 2008 ಕ್ಕೆ ಶ್ರೀಗಳವರನ್ನು ಜಗದ್ಗುರುಗಳಾಗಿ ಸ್ವೀಕರಿಸಿ, ತಮ್ಮ ಶ್ರದ್ಧಾಭಕ್ತಿಯ ಗುರುವಂದನೆಯನ್ನು ಗುರುಗಳ ಚರಣಕಮಲಗಳಲ್ಲಿ ಅರ್ಪಿಸಿದರು.