ರಾಷ್ಟ್ರೀಯ ಧರ್ಮ ಸಂಸದ್ ಯಶಸ್ಸಿಗೆ ಕನ್ಯಾಡಿ ಸಜ್ಜಾಗಿದ್ದು, ಸಂತರು, ಭಕ್ತರಿಗೆ ಸಕಲ ವ್ಯವಸ್ಥೆಗಳನ್ನು ಮಾಡಲಾಗಿದೆ ಎಂದು ಕ್ಷೇತ್ರದ ಪೀಠಾಧಿಪತಿ ಶ್ರೀ ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿ ತಿಳಿಸಿದರು. ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಜಗದ್ಗುರುಗಳು, ಮಹಾಮಂಡಲೇಶ್ವರರು, ನಾಗಾ ಸಾಧುಗಳು, ಪವಿತ್ರ ಬಾಬಾಗಳ ಸಹಿತ 2 ಸಾವಿರಕ್ಕೂ ಅಧಿಕ ಸಂತರು ಪಾಲ್ಗೊಳ್ಳುತ್ತಿದ್ದಾರೆ ಎಂದರು.
ಮುಖ್ಯಮಂತ್ರಿ ಉದ್ಘಾಟನೆ
ಸೆ. 2ರಂದು ಸಂಜೆ 4ರಿಂದ ಉಜಿರೆ ಶ್ರೀ ಜನಾರ್ದನ ಸ್ವಾಮಿ ದೇವಸ್ಥಾನದಿಂದ ಸಂತರ ಬೃಹತ್ ಶೋಭಾಯಾತ್ರೆ ನಡೆಯಲಿದೆ. ಸೆ. 3ರಂದು ಬೆಳಗ್ಗೆ 10.30ಕ್ಕೆ ಧರ್ಮಾಧಿಕಾರಿ ಡಾ| ಡಿ. ವೀರೇಂದ್ರ ಹೆಗ್ಗಡೆ ಅಧ್ಯಕ್ಷತೆಯಲ್ಲಿ ಮುಖ್ಯಮಂತ್ರಿ ಕುಮಾರಸ್ವಾಮಿ ಧರ್ಮಸಂಸದ್ ಉದ್ಘಾಟಿಸಲಿದ್ದಾರೆ. ಕೇಂದ್ರ ಸಚಿವರಾದ ಪ್ರಕಾಶ್ ಜಾಬ್ಡೇಕರ್, ಸದಾನಂದ ಗೌಡ, ಮಾಜಿ ಸಿಎಂ ಯಡಿಯೂರಪ್ಪ, ರಾಜ್ಯ ಸಭಾ ಸದಸ್ಯ ಬಿ.ಕೆ. ಹರಿಪ್ರಸಾದ್, ಸಂಸದರಾದ ನಳಿನ್, ಶೋಭಾ, ಅಧಿ ಕಾರಿ ಡಾ| ಎಸ್.ಸಿ. ಶರ್ಮಾ ಅತಿಥಿ ಗಳಾಗಿ ಭಾಗವಹಿಸಲಿದ್ದಾರೆ ಎಂದರು.
ಸೆ.2ರಂದು ಬೈಠಕ್, ಸೆ. 2ರ ರಾತ್ರಿ ಸಂತರ ವಿಶೇಷ ಬೈಠಕ್
ನಡೆಯಲಿದ್ದು, ಮಹತ್ವದ ನಿರ್ಣಯ ಗಳನ್ನು ಚರ್ಚಿಸಲಾಗುತ್ತದೆ ಎಂದರು. ವಿವಿಧ ಸಮಿತಿಗಳ ಪದಾಧಿಕಾರಿ ಗಳಾದ ಚಿತ್ತರಂಜನ್ ಗರೋಡಿ, ಸತ್ಯಜಿತ್ ಸುರತ್ಕಲ್, ಪೀತಾಂಬರ ಹೆರಾಜೆ, ಮೋಹನ್ ಉಜೊಡಿ, ಸುಜಿತಾ ವಿ. ಬಂಗೇರ, ಸಂಪತ್ ಸುವರ್ಣ, ಭಗೀರಥ ಜಿ., ಕೇಶವ ಬಂಗೇರ ಉಪಸ್ಥಿತರಿದ್ದರು.
15 ಸಾವಿರ ಮಂದಿಯ ಸಭಾಂಗಣ
ಸುಮಾರು 25 ಸಾವಿರ ಭಕ್ತರು ಪಾಲ್ಗೊಳ್ಳಲಿದ್ದು, ಹೆಚ್ಚುವರಿ ಬಸ್ಸಿನ ವ್ಯವಸ್ಥೆ, ಪಾರ್ಕಿಂಗ್ ಸೌಲಭ್ಯ, ಅನ್ನದಾನದ ವ್ಯವಸ್ಥೆ ಇರುತ್ತದೆ. 15 ಸಾವಿರ ಮಂದಿ ಕುಳಿತುಕೊಳ್ಳುವ ವಿಶಾಲ ಸಭಾಂಗಣ, ವೇದಿಕೆಯಲ್ಲಿ 150 ಮಂದಿ ಕುಳಿತು ಕೊಳ್ಳುವ ವ್ಯವಸ್ಥೆ, ಗಣ್ಯರ ವಿಶೇಷ ವೇದಿಕೆ ಯಲ್ಲಿ 300ಕ್ಕೂ ಅಧಿಕ ಆಸನಗಳ ವ್ಯವಸ್ಥೆ ಮಾಡಲಾಗಿದೆ. 700ಕ್ಕೂ ಅಧಿಕ ಸ್ವಯಂಸೇವಕರಿರುತ್ತಾರೆ.