ಮಂಗಳೂರಿನಲ್ಲಿ ಧರ್ಮಸಂಸದ್­ನ ಪೂರ್ವಭಾವಿ ಸಭೆ

ಧರ್ಮಸ್ಥಳ ನಿತ್ಯಾನಂದ ನಗರದ ಶ್ರೀರಾಮ ಕ್ಷೇತ್ರ ಮಹಾ ಸಂಸ್ಥಾನದಲ್ಲಿ ಸೆಪ್ಟೆಂಬರ್ 3 ರಂದು ನಡೆಯಲಿರುವ ರಾಷ್ಟ್ರೀಯ ಧರ್ಮಸಂಸದ್­ನ ಪೂರ್ವಭಾವಿ ಸಭೆ ದಿನಾಂಕ 20-8-2018 ರಂದು ಮಂಗಳೂರು ತೊಕ್ಕೊಟ್ಟಿನ ಸೌಭಾಗ್ಯ ಸಭಾಭವನದಲ್ಲಿ ನಡೆಯಿತು. ಜಿಲ್ಲಾ ಸಂಚಾಲಕ ಕೃಷ್ಣಪ್ಪ ಪೂಜಾರಿ ಕಲ್ಲಡ್ಕ ಪ್ರಾಸ್ತಾವಿಕವಾಗಿ ಕಾರ್ಯಕ್ರಮ ವಿವರ ನೀಡಿದರು.

ಈ ಸಂದರ್ಭದಲ್ಲಿ ಪ್ರಮುಖರಾದ ರವೀಂದ್ರ ಶೆಟ್ಟಿ ಉಳಿದೊಟ್ಟು, ಸಂತೋಷ್ ಕುಮಾರ್ ರೈ ಬೋಳಿಯಾರು, ಜಯರಾಮ ಶೆಟ್ಟಿ ಮಾಜಿ ಶಾಸಕರು, ಕೇ.ಟಿ ಸುವರ್ಣ, ಸದಾನಂದ ಪೂಜಾರಿ ಮಂಗಳೂರು, ಮನೋಜ್ ಕುಮಾರ್ ಸರಿಪಲ್ಲ, ಸತೀಶ ಕು೦ಪಲ ಚಂದ್ರಶೇಖರ್ ಉಚ್ಚಿಲ, ಚಂದ್ರಹಾಸ್ ಉಳ್ಳಾಲ, ಚಂದ್ರಹಾಸ್ ಅಡ್ಯಂತಾಯ, ಬಾಬು ಅಮೀನ್, ಕಿರಣ್ ಗಟ್ಟಿ, ಸೀತಾರಾಮ್ ಇನ್ನಿತರರು ಉಪಸ್ಥಿತರಿದ್ದರು. ವಕೀಲರಾದ ಮೋಹನ್ ರಾಜ್ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.