ರಾಷ್ಟ್ರೀಯ ಧರ್ಮ ಸಂಸದ್‌ನ ಆಮಂತ್ರಣ ಪತ್ರಿಕೆ ವಿತರಣೆ

ಧರ್ಮಸ್ಥಳ ಕನ್ಯಾಡಿ ಶ್ರೀರಾಮ ಕ್ಷೇತ್ರದ ಮಹಾ ಸಂಸ್ಥಾನದಲ್ಲಿ ಸೆಪ್ಟೆಂಬರ್ 3 ರಂದು ನಡೆಯಲಿರುವ ರಾಷ್ಟ್ರೀಯ ಧರ್ಮ ಸಂಸದ್‌ನ ಆಮಂತ್ರಣ ಪತ್ರಿಕೆಯನ್ನು  ಮಾಣಿಲ ಶ್ರೀಧಾಮದ ಶ್ರೀ ಪರಮಹಂಸ ಸ್ವಾಮೀಜಿ, ಒಡಿಯೂರು ಶ್ರೀ ಗುರುದೇವಾನಂದ ಸ್ವಾಮೀಜಿ ಹಾಗೂ ಕಣಿಯೂರು ಶ್ರೀ ಮಹಾಬಲ ಸ್ವಾಮೀಜಿ ಅವರಿಗೆ ನೀಡಿ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವಂತೆ ಆಮಂತ್ರಿಸಲಾಯಿತು. ಈ ಸಂದರ್ಭ ಜಿಲ್ಲಾ ಸಮಿತಿ ಸಂಚಾಲಕ ಕೃಷ್ಣಪ್ಪ ಪೂಜಾರಿ, ಪ್ರಮುಖರಾದ ಬೇಬಿ ಕುಂದರ್, ವಿಶ್ವನಾಥ್ ಬಿ., ಪ್ರಸಾದ್ ನರಿಕೊಂಬು ಉಪಸ್ಥಿತರಿದ್ದರು.