ರಾಷ್ಟ್ರೀಯ ಧರ್ಮಸಂಸದ್ ಕಾರ್ಯಾಲಯ, ಲೋಗೋ, ಶ್ರೀರಾಮಕ್ಷೇತ್ರ ಅಂತರ್ಜಾಲ ತಾಣ ಅನಾವರಣ

ಸೆಪ್ಟೆಂಬರ್ 3 ರಂದು ಧರ್ಮಸ್ಥಳ ಕನ್ಯಾಡಿ ಶ್ರೀರಾಮ ಕ್ಷೇತ್ರ ಮಹಾಸಂಸ್ಥಾನದಲ್ಲಿ ನಡೆಯಲಿರುವ ಸದ್ಗುರು ಶ್ರೀ ಶ್ರೀ ಶ್ರೀ ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿಯವರ ಪಟ್ಟಾಭಿಷೇಕ ದಶಮಾನೋತ್ಸವ ಹಾಗೂ ರಾಷ್ಟ್ರೀಯ ಧರ್ಮಸಂಸದ್ ಕಾರ್ಯಕ್ರಮದ ಅಂಗವಾಗಿ ಇಂದು (31-7-2018) ರಾಷ್ಟ್ರೀಯ ಧರ್ಮ ಸಂಸತ್ ಇದರ ಕಾರ್ಯಾಲಯದ ಉದ್ಘಾಟನೆ, ಧರ್ಮಸಂಸದ್ ಲೋಗೋ ಹಾಗೂ ಶ್ರೀರಾಮ ಕ್ಷೇತ್ರದ ಅಂತರ್ಜಾಲ ತಾಣವನ್ನು ಅನಾವರಣಗೊಳಿಸಲಾಯಿತು.

ಸಭೆಯಲ್ಲಿ ಸದ್ಗುರು ಶ್ರೀ ಶ್ರೀ ಶ್ರೀ ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿ ಅವರು ದೀಪ ಬೆಳಗುವುದರ ಮೂಲಕ ಕಾರ್ಯಾಲಯದ ಉದ್ಘಾಟನೆ ಮಾಡಿದರು. ತದನಂತರ ಧರ್ಮಸಂಸದ್ ಲೋಗೋ ಹಾಗೂ ಶ್ರೀರಾಮ ಕ್ಷೇತ್ರದ ಅಂತರ್ಜಾಲ ತಾಣವನ್ನು ಶ್ರೀಶ್ರೀ ಶ್ರೀ ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿ ಅವರ ಅಮೃತ ಹಸ್ತದಿಂದ ಅನಾವರಣಗೊಳಿಸಿದರು.

ಈ ಸಂದರ್ಭ ಶಾಸಕ ಹರೀಶ್ ಪೂಂಜಾ, ಹರೀಶ್ ಕುಮಾರ್ ವಿಧಾನ ಪರಿಷತ್ ಸದಸ್ಯರು, ವಸಂತ್ ಬಂಗೇರ, ಪ್ರತಾಪ್ ಸಿಂಹ ನಾಯಕ್, ಹಾಗೂ ಊರಿನ ಗಣ್ಯರು ಉಪಸ್ಥಿತರಿದ್ದರು.