ಕುಮಟಾದಲ್ಲಿ ಧರ್ಮ ಸಂಸದ್ ರಥಕ್ಕೆ ಚಾಲನೆ

ಸೆಪ್ಟೆಂಬರ್ 3 ರಂದು ಧರ್ಮಸ್ಥಳ ಕನ್ಯಾಡಿ ಶ್ರೀರಾಮ ಕ್ಷೇತ್ರ ಮಹಾಸಂಸ್ಥಾನದಲ್ಲಿ ನಡೆಯಲಿರುವ ಸದ್ಗುರು ಶ್ರೀ ಶ್ರೀ ಶ್ರೀ ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿಯವರ ಪಟ್ಟಾಭಿಷೇಕ ದಶಮಾನೋತ್ಸವ ಹಾಗೂ ರಾಷ್ಟ್ರೀಯ ಧರ್ಮಸಂಸದ್ ಕಾರ್ಯಕ್ರಮದ  ಅಂಗವಾಗಿ ಧ್ಯೇಯೋದ್ದೇಶವನ್ನು ಸಾರಲು ಧರ್ಮ ಸಂಸದ್ ರಥಕ್ಕೆ ಕುಮಟಾ ನಾಮಧಾರಿ ಸಭಾಭವನದ ಬಳಿ  ದಿನಾಂಕ 29-7-2018 ರಂದು ಚಾಲನೆ ನೀಡಲಾಯಿತು.  ತಾಲೂಕಿನ ಪ್ರತಿ ಹಳ್ಳಿ ಹಳ್ಳಿಗೆ ಧರ್ಮ ಸಂಸದ್ ರಥವು ಭೇಟಿ ನೀಡಲಿದ್ದು ಪ್ರತೀ ಊರುಗಳಲ್ಲಿ ರಥವನ್ನು ಅದ್ಧೂರಿಯಾಗಿ ಸ್ವಾಗತಿಸಲಾಗುತ್ತಿದೆ.