ಶ್ರೀರಾಮ ಕ್ಷೇತ್ರ ಮಹಾ ಸಂಸ್ಥಾನಮ್ ನಿತ್ಯಾನಂದ ನಗರದ ಶ್ರೀರಾಮ ಭಗವಾನ್ ನಿತ್ಯಾನಂದ ಮಂದಿರದಲ್ಲಿ 61ನೇ ವರ್ಷದ ಶ್ರೀರಾಮ ತಾರಕ ಮಂತ್ರ ಸಪ್ತಾಹದ ಉದ್ಘಾಟನೆ ಹಾಗೂ ಶ್ರೀರಾಮ ಕ್ಷೇತ್ರ ಮಹಾ ಸಂಸ್ಥಾನದ ಪ್ರತಿಷ್ಠಾ ಜಾತ್ರಾ ಮಹೋತ್ಸವಕ್ಕೆ ಎ.14ರಂದು ಚಾಲನೆ ದೊರೆಯಿತು.

ಕ್ಷೇತ್ರದ ನಿರ್ಮಾತೃ ಜಗದ್ಗುರು ಶ್ರೀ ಆತ್ಮಾನಂದ ಸರಸ್ವತಿ ಸ್ವಾಮೀಜಿಯವರ ದಿವ್ಯ ಸ್ಮರಣೆಯೊಂದಿಗೆ ಕ್ಷೇತ್ರದ ಪೀಠಾಧೀಶರಾದ  ಸದ್ಗುರು ಶ್ರೀ ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿಯವರ ನೇತೃತ್ವದಲ್ಲಿ ಬೆಂಗಳೂರಿನ ವೇ| ಮೂ| ಲಕ್ಷ್ಮೀಪತಿ ಗೋಪಾಲಾಚಾರ್ಯರ ವೈದಿಕ ವಿಧಿ ವಿಧಾನಗಳು ನಡೆಯಿತು.

ವಿಧಾನ ಪರಿಷತ್ ಸದಸ್ಯ ಕೆ ಪ್ರತಾಪಸಿಂಹ ನಾಯಕ್ ಶ್ರೀರಾಮ ಜಯರಾಮ ಜಯ ಜಯ ತಾರಕ  ನಾಮೋಚ್ಛಾರಣೆ ಹೇಳುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಕಾರ್ಯಕ್ರಮದಲ್ಲಿ ಶಾಸಕ ಹರೀಶ್ ಪೂಂಜಾ, ಕೀಮೋನಿಕ್ಸ್ ಅಧ್ಯಕ್ಷ ಹರಿಕೃಷ್ಣ ಬಂಟ್ವಾಳ್, ಕಂಕನಾಡಿ ಗರೋಡಿ ಅಧ್ಯಕ್ಷ ಚಿತ್ತರಂಜನ್ , ಬೆಳ್ತಂಗಡಿ ಬಿಲ್ಲವ ಮಹಿಳಾ ವೇದಿಕೆಯ ಸ್ಥಾಪಕ ಅಧ್ಯಕ್ಷೆ ಸುಜಿತಾ ವಿ.ಬಂಗೇರ,  ಬೆಳ್ತಂಗಡಿ ಬ್ಲಾಕ್ ಕಾಂಗ್ರೇಸ್ ನಗರ ಅಧ್ಯಕ್ಷ ಶೈಲೇಶ್ ಕುಮಾರ್, ಪುತ್ತೂರು ಬಿಲ್ಲವ ಸಂಘದ ಅಧ್ಯಕ್ಷ ಜಯಂತ ನಡುಬೈಲು, ಧರ್ಮಸ್ಥಳ ಗ್ರಾ.ಪಂ ಅಧ್ಯಕ್ಷ ಜಯಮೋನಪ್ಪಗೌಡ, ತಾ.ಪಂ ಸದಸ್ಯರುಗಳಾದ ಧನಲಕ್ಷ್ಮೀ ಜನಾರ್ದನ, ಶಶಿಧರ ಎಂ. ಕಲ್ಮಂಜ,  ಸಹಾಯಕ ಕಾರ್ಯಾಪಾಲ ಅಭಿಯಂತರರಾದ ಶಿವಪ್ರಸಾದ್ ಅಜಿಲರು, ಉಜಿರೆ ಗ್ರಾ.ಪಂ ಉಪಾಧ್ಯಕ್ಷ ರವಿ ಕುಮಾರ್ ಬರೆಮೇಲು, ಅನಂತರಾಮ ರಾವ್ ಚಾರ್ಮಾಡಿ, ಬಿಲ್ಲವರ ಮಹಾಮಂಡಲದ ಉಪಾಧ್ಯಕ್ಷ ನಿವೃತ್ತ ಎಸ್.ಪಿ. ಪೀತಾಂಬರ ಹೇರಾಜೆ, ಉದ್ಯಮಿ ಸತ್ಯಜಿತ್ ಸುರತ್ಕಲ್, ಶ್ರೀರಾಮ ಕ್ಷೇತ್ರ ಸಮಿತಿ ತಾಲೂಕು ಅಧ್ಯಕ್ಷ ಸದಾನಂದ ಉಂಗಿಲಬೈಲು, ಕಾರ್ಯದರ್ಶಿ ಮಂಜುನಾಥ್ ಶೆಟ್ಟಿ ನಿಡ್ಗಲ್, ನೋಟರಿ ವಕೀಲ ಭಗೀರಥ ಜಿ, ತಿಮಪ್ಪ ಗೌಡ ಬೆಳಾಲು, ಚಿದಾನಂದ ಇಡ್ಯ, ರಾಮಚಂದ್ರ ಶೆಟ್ಟಿ ಉಜಿರೆ, ಎಸ್.ಎಂ. ನಾಯ್ಕ್ ಭಟ್ಕಳ, ಪ್ರಶಾಂತ್ ಪ್ರತಿಮಾ ನಿಲಯ, ವಕೀಲ ಅನಿಲ್ ಕುಮಾರ್, ಮಂಗಳೂರು ಎಂ.ಪಿ ಸಿಲ್ಕ್ ನ ಎಂ.ಪಿ. ದಿನೇಶ, ಪ್ರಭಾಕರ ಪೂಜಾರಿ ಧರ್ಮಸ್ಥಳ, ಗ್ರಾ.ಪಂ ಸದಸ್ಯ ಹರೀಶ್ ಕುಮಾರ್ ಸುವರ್ಣ ಕನ್ಯಾಡಿ, ಶ್ರೀರಾಮ ಕ್ಷೇತ್ರ ಸಮಿತಿ ಧರ್ಮಸ್ಥಳ ಗ್ರಾಮ ಸಮಿತಿ ಅಧ್ಯಕ್ಷ ಪುರುಷೋತ್ತಮ, ಕಲ್ಮಂಜ ಗ್ರಾಮ ಸಮಿತಿ ಅಧ್ಯಕ್ಷ ಕೃಷ್ಣಪ್ಪ ಗುಡಿಗಾರ, ಬೆಳಾಲು ಗ್ರಾಮ ಸಮಿತಿ ಅಧ್ಯಕ್ಷ ಜಾರಪ್ಪ ಪೂಜಾರಿ, ಇಂಜಿನಿಯರ್ ಸೂರ್ಯನಾರಾಯಣ ಉಜಿರೆ, ಬಿಜೆಪಿ ಯುವಮೋರ್ಚಾ ತಾಲೂಕು ಅಧ್ಯಕ್ಷ ಯಶವಂತ ಬೆಳಾಲು, ರವೀಂದ್ರ ಪೂಜಾರಿ ಆರ್ಲ, ಸುಜಾತ ಅಣ್ಣಿ ಪೂಜಾರಿ, ಟ್ರಸ್ಟಿ ತುಕರಾಮ ಸಾಲ್ಯಾನ್ ಆರ್ಲ, ವಿವಿಧ ಭಜನಾ ಮಂಡಳಿಗಳ ಸದಸ್ಯರು, ಕ್ಷೇತ್ರದ ಸಿಬ್ಬಂದಿ ವರ್ಗದವರು, ರಥಬೀದಿ ವ್ಯಾಪಾರಸ್ಥರು, ಅರ್ಚಕ ವೃಂದದವರು, ಭಕ್ತಾದಿಗಳು ಹಾಜರಿದ್ದರು.